ಬೇಕಾಗುವ ಸಾಮಾಗ್ರಿಗಳು : ತರಕಾರಿ (ಆಲುಗೆಡ್ಡೆ, ಬೀನ್ಸ್, ಬಟಾಣಿ ನುಗ್ಗೆಕಾಯಿ) ಈರುಳ್ಳಿ-2, ಟೊಮೇಟೋ-1, ಶುಂಠಿ, ಬೆಳ್ಳುಳ್ಳಿ, ಸಾಸಿವೆ, ಕರಿಬೇವು, ಕೊತ್ತಂಬರಿ ಸೊಪ್ಪು, ಸ್ವಲ್ಪ ಹುಣಸೆ ಹಣ್ಣಿನ ರಸ, ಮೂರು ಟೇಬಲ್ ಸ್ಪೂನ್ ಇಮುನ
ಸಾಂಬಾರು ಹುಡಿ ತಯಾರಿಸುವ ವಿಧಾನ : ತರಕಾರಿ ಹಾಗೂ ತೊಗರಿ ಬೇಳೆಯನ್ನು ಬೇರೆ ಬೇರೆಯಾಗಿ ಬೇಯಿಸಿ, ಬೇಯಿಸಿದ ತೊಗರಿಬೇಳೆಗೆ ಅಗತ್ಯಕ್ಕೆ ತಕ್ಕಷ್ಟು ನೀರನ್ನು ಹಾಕಿ, ಶುಂಠಿ, ಕತ್ತರಿಸಿದ ಈರುಳ್ಳಿ, ಕತ್ತರಿಸಿದ ಟೊಮೇಟೋ, ಹುಣಸೆ ಹಣ್ಣಿನ ರಸ ಹಾಗೂ ಮೂರು ಟೇಬಲ್ ಸ್ಪೂನ್ ಇಮುನ ಸಾಂಬಾರ್ ಹುಡಿ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಹದ ಬೆಂಕಿಯಲ್ಲಿ ಕುದಿಸಿ. ಅದಕ್ಕೆ ಬೇಯಿಸಿದ ತರಕಾರಿಯನ್ನು ಹಾಕಿ ಅದರ ಮೇಲೆ ಕೊತ್ತಂಬರಿ ಸೊಪ್ಪು ಹರಡಿ ಬೆಂಕಿಯಿಂದ ಇಳಿಸಿ, ಎರಡು ಟೀ ಸ್ಪೂನ್ ಎಣ್ಣೆಯಲ್ಲಿ ಸಾಸಿವೆ, ಬೆಳ್ಳುಳ್ಳಿ, ಕರಿಬೇವಿನ ಎಲೆಯ ಒಗ್ಗರಣೆಯನ್ನು ಹಾಕಿ.