ಬೇಕಾಗುವ ಸಾಮಾಗ್ರಿಗಳು: 1 ಕಿ.ಲೋ ಶುಚಿಗೊಳಿಸಿದ ಕೋಳಿಮಾಂಸ, 1 ದೊಡ್ಡ ಈರುಳ್ಳಿ, 1 ಟೇಬಲ್ ಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 2 ಟೇಬಲ್ ಸ್ಪೂನ್ ಕೊತ್ತಂಬರಿ ಮಿಂಟ್ ಚಿಕನ್ ಮಸಾಲ, 4 ಟೇಬಲ್ ಸ್ಪೂನ್ ತುಪ್ಪ.
ಅರೆದಿಡಲು: ಕೊತ್ತಂಬರಿ ಸೊಪ್ಪು 150ಗ್ರಾಂ, 2 ದಂಟು ಪುದಿನ, 5 ಹಸಿಮೆಣಸಿನಕಾಯಿ, 1 ಕಪ್ ದಪ್ಪ ಮೊಸರು, ಕರಿಬೇವಿನ
ಎಲೆ 3 ದಂಟು, 5 ಗೇರುಬೀಜ
ತಯಾರಿಸುವ ವಿಧಾನ: ಒಂದು ಬಾಣಲೆಯಲ್ಲಿ ತುಪ್ಪವನ್ನು ಬಿಸಿಮಾಡಿ ಅದಕ್ಕೆ ಕೊಚ್ಚಿದ ಈರುಳ್ಳಿಯನ್ನು ಸೇರಿಸಿ ನಸುಗಂದು ಬಣ್ಣ ಬರುವವರೆಗೂ ಹುರಿಯಿರಿ.ನಂತರ ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಶುಚಿಗೊಳಿಸಿದ ಕೋಳಿ ತುಂಡುಗಳನ್ನು ಸೇರಿಸಿ ಸ್ವಲ್ಪ ಹುರಿಯಿರಿ. ಕೋಳಿ ಮುಕ್ಕಾಲು ಬೆಂದ ಮೇಲೆ ಅದಕ್ಕೆ ಕೊತ್ತಂಬರಿ ಸೊಪ್ಪಿನೊಂದಿಗೆ ಅರೆದಿಟ್ಟ ಮಸಾಲೆ ಮತ್ತು 2 ಟೇಬಲ್ ಸ್ಪೂನ್ ಇಮುನ ಕೊತ್ತಂಬರಿ ಮಿಂಟ್ ಚಿಕನ್ ಮಸಾಲ ಸೇರಿಸಿ ಚೆನ್ನಾಗಿ ತಿರುಗಿಸಿ (ಹುರಿದು) ಕೋಳಿ ಬೆಂದ ಮೇಲೆ ಬೆಂಕಿಯಿಂದ ಕೆಳಗಿಳಿಸಿ.